ಮಂಗಳೂರು : ' ಮಂದಾರ ರಾಮಾಯಣವು ತುಳುವ ಮಣ್ಣಿನ ಜನಪದ ಸೊಗಡನ್ನು ಹೊಂದಿದ್ದು ಅದು ಅಂದಿಗೂ ಇಂದಿಗೂ ಪ್ರಸ್ತುತವಾಗಿದೆ. ಆದುದರಿಂದಲೇ ಮಂದಾರ ರಾಮಾಯಣ ಸಾಮಾನ್ಯ ಜನರಿಗೂ ಅತ್ಯಂತ ನಿಕಟವಾಗಿ ತೋರುತ್ತದೆ' ಎಂದು ತುಳುವೆರೆ ಆಯನೊ ಕೂಟ ಬದಿಯಡ್ಕದ ಗೌರವ ಅಧ್ಯಕ್ಷ ಪ್ರೊ. ಎ. ಶ್ರೀನಾಥ್ ಅಭಿಪ್ರಾಯಪಟ್ಟರು.
ಅವರು ಶಕ್ತಿನಗರ ತುಳುವೆರೆ ಚಾವಡಿಯಲ್ಲಿ ಜರಗಿದ 'ಏಳದೆ ಮಂದಾರ ರಾಮಾಯಣ: ಸುಗಿಪು - ದುನಿಪು' ಪ್ರವಚನ ಸಪ್ತಾಹದ ಐದನೇ ದಿನದ ಕಾರ್ಯಕ್ರಮಕ್ಕೆ ದೀಪ ಬೆಳಗಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಕ್ಷಗಾನ ವಿದ್ವಾಂಸ ಡಾ. ಎಂ ಪ್ರಭಾಕರ ಜೋಶಿ ವಹಿಸಿದ್ದರು. ಉದ್ಯಮಿಗಳಾದ ಗಣೇಶ್ ಮಹಾಕಾಳಿ , ತುಳುವೆರೆ ಆಯನೊ ಕೂಟ ಕುಡ್ಲದ ಕಾರ್ಯದರ್ಶಿ ಯಾದವ ಕೋಟ್ಯಾನ್, ತುಳುವೆರೆ ಕೂಟ ಅಧ್ಯಕ್ಷೆ ಭಾರತಿ ಅಮೀನ್ ಅತಿಥಿಗಳಾಗಿದ್ದರು.
ಮಂದಾರ ರಾಮಾಯಣ ಸಪ್ತಾಹದ ಸಂಚಾಲಕ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತುಳುವರ್ಲ್ಡ್ (ರಿ.) ಕುಡ್ಲ ಅಧ್ಯಕ್ಷ ಡಾ.ರಾಜೇಶ್ ಆಳ್ವ ಅತಿಥಿಗಳನ್ನು ಗೌರವಿಸಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯೆ ವಿದ್ಯಾಶ್ರೀ ಉಳ್ಳಾಲ್ ಕಾರ್ಯಕ್ರಮ ನಿರ್ವಹಿಸಿದರು.
ಮಂದಾರ ರಾಮಾಯಣದ ಐದನೇ ದಿನದ ' ಪಟ್ಟೊಗು ಪೆಟ್ಟ್' ಕಾವ್ಯ ಭಾಗವನ್ನು ಶಿವಪ್ರಸಾದ್ ಎಡಪದವು, ಶಾಲಿನಿ ಹೆಬ್ಬಾರ್ ವಾಚಿಸಿದರು. ಡಾ. ದಿನಕರ್ ಎಸ್. ಪಚ್ಚನಾಡಿ ವ್ಯಾಖ್ಯಾನಿಸಿದರು. ಭೂಷಣ್ ಕುಲಾಲ್ ಸ್ವಾಗತಿಸಿ ಶೃತಿ ಹರ್ಷ ವಂದಿಸಿದರು.