ಶಿವರಾಜ್ ಕುಮಾರ್ ಮತ್ತು ರಚಿತಾ ರಾಮ್ ಅಭಿನಯದ ಆನಂದ ಚಿತ್ರೀಕರಣಕ್ಕೆ ಕೇರಳದ ಪೊಟ್ಟಂ ತೆಯ್ಯಂಮೀನ ಕೋಲ ನಡೆಸಿ ಚಿತ್ರೀಕರಣದ ಒಂದು ಭಾಗವನ್ನು ಪೊಳಲಿ ರಾಜರಾಜೇಶ್ವರಿ ದೇವಸ್ಥಾನದ ಬಳಿ ಚಿತ್ರೀಕರಿಸಲಾಯಿತು. ಕರ್ನಾಟಕ ಜನಪದ ಪ್ರಶಸ್ತಿವಿಜೇತ ಕೇರಳದ ತೆಯ್ಯಂ ನರ್ತಕ ಮನು ಪಣಿಕರ್ ಮತ್ತು ಬಳಗದವರಿಂದ ಪೊಟ್ಟಂ ತೆಯ್ಯಂ ಕೋಲ ಮತ್ತು ಕೆಂಡಸೇವೆ ನಡೆಸಲಾಯಿತು.
ನಟಿ ರಚಿತಾ ರಾಮ್ಗೆ ಅಗ್ನಿಯ ಬಗ್ಗೆ ಇರುವ ಭಯವನ್ನು ಹೋಗಲಾಡಿಸುವ ದೃಶ್ಯವನ್ನು ನೈಜ ದೈವ ಸೇವೆಯನ್ನು ನೀಡಿ ಚಿತ್ರೀಕರಿಸಲ್ಪಟ್ಟದ್ದು ದೈವಾರಾಧನೆಗೆ ನೀಡಿದ ಗೌರವವಾಗಿತ್ತು. ಚಿತ್ರಿಕರಣದ ದೈವಾರಾಧನೆಯ ವ್ಯವಸ್ಥೆಯನ್ನು ತುಳುವರ್ಲ್ಡ್ ಮಂಗಳೂರು ವಹಿಸಿ ಚಿತ್ರತಂಡದ ಶ್ಲಾಘನೆಗೆ ಪಾತ್ರವಾಯಿತು.
ನಿರ್ಮಾಪಕ ದ್ವಾರಕೀಶ್ ಯೋಗೇಶ್ ನಿರ್ದೇಶಕ ಪಿ ವಾಸು ಸಂಗೀತ ನಿರ್ದೇಶಕ ಗುರುಕಿರಣ್ ಚಿನ್ನರ ಲೋಕ ಟ್ರಸ್ಟಿನ ಮೋಹನದಾಸ ಕೊಟ್ಟಾರಿ ತುಳುವರ್ಲ್ಡ್ ಅಧ್ಯಕ್ಷ ಡಾ. ರಾಜೇಶ್ ಆಳ್ವ ತುಳುವರ್ಲ್ಡ್ ಸದಸ್ಯರಾದ ನಿಶಾಂತ್ ಬದಿಯಡ್ಕ ಹರ್ಷ ರೈ ಪುತ್ರಕಳ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.